ಕಗ್ಗ

ಕಗ್ಗವೇ ಒಂದು ಸಾಹಿತ್ಯ. ಅದಕ್ಕೆ ವಿಶೇಷ ಸ್ಥಾನವುಂಟು ನನ್ನ ಹೃದಯದಿ ಮತ್ತು ಅಂತರ್ಜಾಲ ತಾಣದಿ !

ಲೋಗರಾಟಗಳನಾಡು ಗೊಮ್ಮಟನ ತೆರದಿ

( ಕಗ್ಗವೊಂದನ್ನು Grp.Capt. ಶ್ರೀಹರಿ ಕೌಶಿಕ್ ಕಳುಹಿದ ಅವರೇ ತೆಗೆದ ಚಿತ್ರದ ಪ್ರೇರಣೆಯಿಂದ ಹದಿನಾಲ್ಕು ಸಾಲಿನ ಸುನೀತವಾಗಿಸಿದ್ದೇನೆ sonnet )


_________________________________________________

ಲೋಗರಾಟಗಳನಾಡು ಗೊಮ್ಮಟನ ತೆರದಿ

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ ।
ಹೊರಕೋಣೆಯಲಿ ಲೋಗರಾಟಗಳನಾಡು ॥
ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ ।
ವರಯೋಗಸೂತ್ರವಿದು – ಮಂಕುತಿಮ್ಮ ॥ ೭೦೧ ॥

ಚಿರಸ್ಥಾಯಿ ಇನಬಿಂಬ ತೆರನಂತೆ ನಿಲುಮೆಯಲಿ ।
ಪೊರೆ ನೀನು ಒಳಕೋಣೆಯೊಳ ಸ್ಥಿತಿಯ ಜಾಣ್ಮೆಯಲಿ ॥
ಗರಡಿಯನು ಅಣಿಮಾಡಿ ಗೊಮ್ಮಟನ ರೀತಿಯಲಿ ।
ಹೊರಲೋಕದರಿವೆಲ್ಲಿ ಮನ ಬ್ರಹ್ಮದಲಿ ನಿಲಲು ॥

ಹೊರಕೋಣೆಯಾಗುವುದು ನಿನ ಸ್ಥೈರ್ಯಪ್ರತಿಬಿಂಬ ।
ಮೊರೆವವಲೆಯಲೆಗಳೀ ಬಾಳದೋಣಿಯಲೀ ॥
ಪರಿಪರಿಯ ರೂಪದಲಿ ಪ್ರತಿರೂಪ ಮಿಡಿಯುವುದು ।
ಹಿರಿತನದಿ ಮಿಡಿಯುವುದು ಒಳರೂಪವಲುಗದಿರೆ ॥

ಹೊರಕೋಣೆಯಲಿ ಲೋಗರಾಟಗಳನಾಡು ॥
ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ ॥

_________________________________________________

ಕಗ್ಗ

ಕಗ್ಗನವನೋದದ ಕರುನಡನಿರ್ದೊಡೇನು ನೆಲದಿ

ಬ್ರಹ್ಮವನರಿಯದ ಬ್ರಾಹ್ಮಣನಿರ್ದೊಡೇನು ಭವದಿ

ಖಡ್ಗವ ಹಿಡಿಯದ ಕ್ಷತ್ರಿಯನಿರ್ದೊಡೇನು ಭುವದಿ

ಮಂಕುತಿಮ್ಮನವನ ಅನ್ವರ್ಥನಾಗನೇ ಇಹದಿ?

– ಮೈನಾಶ್ರೀ

——————–
ಕನ್ನಡ ಕಲಿಯದವರಿಗಾಗಿ:
ಕರುನಡ = ಕನ್ನಡಿಗ
ಅನ್ವರ್ಥ = ಹೆಸರಿಗೆ ಸರಿಯಾಗಿ (ಮಂಕು ತಿಮ್ಮನಾಗನೇ ನಿಜವಾಗಿ ಅಂಥ )
ಇಹ = ಇಲ್ಲಿ …ಈ ಭೂಮಿಯಲ್ಲಿ