ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯದ ವಿಚಾರಗಳು

ಸರ್ವಜ್ಞನ ವಚನ – ೭ – ಕೆರವಾಗಿ ಗುರುವಿನ ಹತ್ತಲಿರು

ವಚನ ೭ 

ಎತ್ತಾಗಿ ತೊತ್ತಾಗಿ! ಹಿತ್ತಲದ ಗಿಡವಾಗಿ!
ಮತ್ತೆ ಪಾದದ ಕೆರವಾಗಿ ಗುರುವಿನ!
ಹತ್ತಲಿರು ಎಂದ ಸರ್ವಜ್ಞ!

ತಾತ್ಪರ್ಯ:

ಯಾವಾಗಲೂ ಗುರುವಿನ ಬಳಿಯಲ್ಲಿಯೇ ಇರು. ಗುರುವನ್ನು ಬಿಟ್ಟು ಅಗಲಬೇಡ. ಗುರುವಿನ ಆಳಾಗಿ ಇಲ್ಲವೆ ಅವನ ಪಾದರಕ್ಷೆಯಾಗಿದ್ದರೂ ಅಡ್ಡಿಯಿಲ್ಲ. ಅವನ ಬಳಿಯೇ ಇರು.

#ಸರ್ವಜ್ಞ_ವಚನ_೭
#ಸರ್ವಜ್ಞ_ವಚನ_ನಿಧಿ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||

ಸರ್ವಜ್ಞನ ವಚನ – ೬ – ಗುರುವೊಂದು ದೈವ

ವಚನ

ಗುರುಮನುಜನೆಂದವಗೆ! ಹರನ ಶಿಲೆಯೆಂದವಗೆ!
ಕರುಣ ಪ್ರಸಾದವನು ಎಂಜಲೆಂದವನಿಗೆ!
ನರಕ ತಪ್ಪುವುದೇ ಸರ್ವಜ್ಞ!

ತಾತ್ಪರ್ಯ:

ಗುರುವನ್ನು ಅವನೊಬ್ಬ ಮಾನವನು ಎನ್ನುವ್ವನಿಗೆ,ದೇವದೇವನಾದ ಮಹದೇವನನ್ನು ಶಿಲೆ(ಕಲ್ಲಿನ ಮೂರ್ತಿ) ಎನ್ನುವವನಿಗೆ ಪ್ರಸಾದವನ್ನು ಎಂಜಲು ಎಂದು ಹೀಯಾಳಿಸುವವನಿಗೆ ನರಕವು ಎಂದಿಗೂ ತಪ್ಪಲಾರದು.

#ಸರ್ವಜ್ಞ_ವಚನ_೬
#ಸರ್ವಜ್ಞ_ವಚನ_ನಿಧಿ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||

ಸರ್ವಜ್ಞನ ವಚನ – ೫ – ತಂದೆ ಗುರುವ ಗುರುವು ಮುಕ್ತಿ ತೋರ್ವರು

ವಚನ ೫

ತಂದೆಗೂ ಗುರುವಿಗೂ! ಒಂದು ಅಂತರವುಂಟು!
ತಂದೆ ತೋರುವನು ಸದ್ಗುರುವ,ಗುರುರಾಯ!
ಬಂಧನವ ಕಳೆವ ಸರ್ವಜ್ಞ!

ತಾತ್ಪರ್ಯ:

ತಂದೆಗೂ ಗುರುವಿಗೂ ಒಂದೇ ಒಂದು ಅಂತರವುಂಟು. ಅದೆಂದರೆ ತಂದೆಯು ಒಳ್ಳೆಯ ಗುರುವನ್ನು ತೋರಿಸುತ್ತಾನೆ ಮತ್ತು ಗುರುವರ್ಯನು ಬಂಧನವನ್ನು ಕಳೆಯುತ್ತಾನೆ.

#ಸರ್ವಜ್ಞ_ವಚನ_೫
#ಸರ್ವಜ್ಞ_ವಚನ_ನಿಧಿ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||

ಸರ್ವಜ್ಞನ ವಚನ – ೪ – ಗುರುವೇ ಶ್ರೇಷ್ಠ ಬಂಧು

ವಚನ

ಬಂಧುಗಳು ಆದವರು! ಬಂದುಂಡು ಹೋಗುವರು!
ಬಂಧನವ ಕಳೆಯಲರಿಯರು,ಗುರುವಿಂದ!
ಬಂಧುಗಳು ಉಂಟೆ ಸರ್ವಜ್ಞ!

ತಾತ್ಪರ್ಯ:

ಬಂಧು-ಬಳಗದವರೆಲ್ಲ ಬಂದು ಊಟಮಾಡಿ ಹೋಗುವುದಕ್ಕಷ್ಟೆ ಹೊರತು ಬಂಧನವನ್ನು ಕಳೆಯಲಾರರು. ಆದರೆ ಎಲ್ಲ ಬಂಧನಗಳನ್ನು ಹೊಡೆದೋಡಿಸುವಂಥ ಶಕ್ತಿಯುಳ್ಳ ಗುರುವಿಗಿಂತ ಹೆಚ್ಚಿನ ಬಂಧುಗಳು ಯಾರಿದ್ದಾರೆ? (ಯಾರೂ ಇಲ್ಲ)

#ಸರ್ವಜ್ಞ_ವಚನ_೪
#ಸರ್ವಜ್ಞ_ವಚನ_ನಿಧಿ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||

ಸರ್ವಜ್ಞನ ವಚನ – ೩ – ದಾರಿ ತೋರಬಲ್ಲ ಗುರು ಯಾರಾದರೇನು?

ವಚನ ೩

ಊರಿಂಗೆ ದಾರಿಯನು ಆರು ತೋರಿದೊಡೇನು!
ಸಾರಾಯದ ನಿಜವ ತೋರುವ ಗುರುವು ತಾ!
ನಾರಾದಡೇನು ಸರ್ವಜ್ಞ!

ತಾತ್ಪರ್ಯ:

ತನಗೆ ಗೊತ್ತಿಲ್ಲದ ಊರಿನ ದಾರಿಯನು ಇಂಥವರೇ ತೋರಿಸಬೇಕೆಂಬ ನಿಯಮವಿರುವುದಿಲ್ಲ. ಅಂಥ ಸಮಯದಲ್ಲಿ ಯಾರು ದಾರಿ ತೋರಿಸಿದರೂ ಸರಿಯೇ, ಊರು ತಲುಪುತ್ತಾರೆ.ಅದರಂತೆ ಸತ್ಯದ(ಸಾರಾಯದ) ಅರಿವನ್ನು ತಿಳಿಸಿಕೊಡುವ ಗುರುವು ಎಂಥವನಿದ್ದರೇನು?

#ಸರ್ವಜ್ಞ_ವಚನ_೩
#ಸರ್ವಜ್ಞ_ವಚನ_ನಿಧಿ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||

ಸರ್ವಜ್ಞನ ವಚನ – ೨ – ದೇಹಕ್ಕೆ ಕುಲವೆಲ್ಲಿಂದ ಬಂದಿತು?

ವಚನ ೨

ಎಲುವಿನೀ ಕಾಯಕ್ಕೆ ಸಲೆ ಚರ್ಮದಾ ಹೊದಿಕೆ!
ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕೆ!
ಕುಲವಾವುದಯ್ಯ ಸರ್ವಜ್ಞ!

ತಾತ್ಪರ್ಯ:

ಚೆನ್ನಾಗಿ ಚರ್ಮದ ಹೊದಿಕೆಯುಳ್ಳ ಎಲುವಿನ ಹಂದರದ ಮತ್ತು ಮಲ ಮೂತ್ರಾದಿಗಳು ತುಂಬಿಕೊಂಡಿರುವಂಥ ದೇಹಕ್ಕೆ ಕುಲವೆಲ್ಲಿಂದ ಬಂದಿತು? (ಜಾತಿಭೇಧವಿಲ್ಲವೆಂಬುದೇ ಈ ವಚನದ ಅರ್ಥವಾಗಿದೆ).

#ಸರ್ವಜ್ಞ_ವಚನ_೧
#ಸರ್ವಜ್ಞ_ವಚನ_ನಿಧಿ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||

ಸರ್ವಜ್ಞನ ವಚನ – ೧ – ಗಣಪತಿಯ ಪ್ರಾರ್ಥನೆ

ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.

ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.

ಸರ್ವಜ್ಞನಿಗೆ ನಮೋನ್ನಮಃ ||
ಮೊದಲನೆಯದು ಪ್ರಾರ್ಥನೆಯಾಗಿ ಹೀಗಿದೆ:

ವಚನ ೧
ನಂದಿಯನು ಏರಿದನ ಚಂದಿರನ ಸೂಡಿದನ!
ಕಂದನ ಬೇಡಿ, ನಲಿದಾನು ನೆನವುತ್ತ
ಮುಂದೆ ಪೇಳುವೆನು ಸರ್ವಜ್ಞ!!

ತಾತ್ಪರ್ಯ:
ನಂದಿ ವಾಹನನೂ ಚಂದ್ರನನ್ನು ತಲೆಯಲ್ಲಿ ಧರಿಸಿದವನೂ ಆದ ಶಂಕರನ ಸುತ ಗಣಪತಿಯನ್ನು ಪ್ರಾರ್ಥಿಸಿ ಮಂದಿನ ಪದ್ಯಗಳನ್ನು ಪ್ರಾರಂಭಿಸುವೆನು.

#ಸರ್ವಜ್ಞ_ವಚನ_೧
#ಸರ್ವಜ್ಞ_ವಚನ_ನಿಧಿ