ವಚನ ೩
ಊರಿಂಗೆ ದಾರಿಯನು ಆರು ತೋರಿದೊಡೇನು!
ಸಾರಾಯದ ನಿಜವ ತೋರುವ ಗುರುವು ತಾ!
ನಾರಾದಡೇನು ಸರ್ವಜ್ಞ!
ತಾತ್ಪರ್ಯ:
ತನಗೆ ಗೊತ್ತಿಲ್ಲದ ಊರಿನ ದಾರಿಯನು ಇಂಥವರೇ ತೋರಿಸಬೇಕೆಂಬ ನಿಯಮವಿರುವುದಿಲ್ಲ. ಅಂಥ ಸಮಯದಲ್ಲಿ ಯಾರು ದಾರಿ ತೋರಿಸಿದರೂ ಸರಿಯೇ, ಊರು ತಲುಪುತ್ತಾರೆ.ಅದರಂತೆ ಸತ್ಯದ(ಸಾರಾಯದ) ಅರಿವನ್ನು ತಿಳಿಸಿಕೊಡುವ ಗುರುವು ಎಂಥವನಿದ್ದರೇನು?
#ಸರ್ವಜ್ಞ_ವಚನ_೩
#ಸರ್ವಜ್ಞ_ವಚನ_ನಿಧಿ
ಶ್ರೀ ಶ್ರೀನಿಧಿ ಟಿ ಕೆ ಅವರು ನಮ್ಮೊಂದಿಗೆ ಕಲಮದಾನಿ ಗುರುರಾಯರು ಸಂಗ್ರಹಿಸಿದ ಸರ್ವಜ್ಞ ವಚನಗಳನ್ನು ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನಾನು ಇಲ್ಲಿ ಹಾಕಿದ್ದೀನಿ.
ಇದನ್ನು ಗಣಕೀಕರಿಸಿ ದಿನವೂ ವಚನ ಮಧುವನ್ನು ಜೀವನ ಧರ್ಮ ಸುಧೆಯನ್ನು ನಮಗುಣಿಸುತ್ತಿರುವ ಶ್ರೀನಿಧಿಯವರಿಗೆ ಮತ್ತು ಗುರುರಾಯರಿಗೆ ಅನಂತ ಕೃತಜ್ಞತೆಗಳು.
ಸರ್ವಜ್ಞನಿಗೆ ನಮೋನ್ನಮಃ ||